ಹಿಜಾಬ್ ವಿವಾದ; ಸಿದ್ದರಾಮಯ್ಯ ಯಾವುದೋ ಒಂದು ಪಂಗಡದ ಸಿಎಂ ಅಲ್ಲ: ಪೇಜಾವರ ಶ್ರೀ

ಬೆಳಗಾವಿ: ಸಿದ್ದರಾಮಯ್ಯ ಅವರು ಯಾವುದೋ ಒಂದು ಪಂಗಡದ ಮುಖ್ಯಮಂತ್ರಿಯಲ್ಲ. ಇಡೀ ರಾಜ್ಯದ ಸಿಎಂ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುತ್ತೇವೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದಲ್ಲಿ ಒಂದು ಪಂಗಡವನ್ನು ಗುರಿಯಾಗಿರಿಸಿಕೊಂಡು, ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಒಂದು ನ್ಯಾಯ, ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಒಂದು ಕಾನೂನು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಇಡೀ ಕರ್ನಾಟಕದ ಮುಖ್ಯಮಂತ್ರಿ ಹೊರತು ಯಾವುದೇ ಒಂದು ಪಂಗಡದ ಸಿಎಂ ಅಲ್ಲ.

ಇತ್ತೀಚೆಗೆ ಪರೀಕ್ಷೆ ಬರೆಯುವಾಗ ಹಿಂದೂಗಳಾದವರು ಕಾಲುಂಗರ, ತಾಳಿ ತೆಗೆಯಬೇಕು ಎಂಬ ಆದೇಶ ಬಂದಿತ್ತು. ಒಂದು ಕಡೆ ಹೀಗಾದರೆ, ಮತ್ತೊಂದು ಪಂಗಡದವರಿಗೆ ಮುಸು ಹಾಕಿ ಹೋಗಬಹುದು ಎನ್ನುತ್ತಾರೆ.

ಹೀಗೆ ಯಾರೂ ಮಾಡಬಾರದು,ಸಿಎಂ ಈ ರೀತಿ ಆಡಳಿತ ನಡೆಸಬಾರದು ಅದು ಸರಿಯಲ್ಲ ಎಂದು ಹೇಳಿದರು.