ದೇವೇಗೌಡರು ನನ್ನ ಗುರುಗಳು -ಸೋಮಣ್ಣ

ಬೆಂಗಳೂರು: ದೇವೇಗೌಡರು ನನ್ನ ಗುರುಗಳು. ನಾನು ಅವರ ಶಿಷ್ಯ ಹಾಗಾಗಿ ಭೇಟಿ ಮಾಡಿದ್ದೇನೆ ಇದರಲ್ಲಿ ವಿಶೇಷವಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಎಚ್ .ಡಿ ದೇವೇಗೌಡರ ಪದ್ಮನಾಭನಗರದ ನಿವಾಸಕ್ಕೆ ತೆರಳಿ ಭೇಟಿ ಮಾಡಿದ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.

ನಾನು ಸೋತಬಳಿಕ ನನಗೆ ಕರೆ ಮಾಡಿ ದೇವೆಗೌಡರು ಮಾತಾಡಿದ್ದರು,1983ರಲ್ಲಿ ನಾನು ರಾಜಕೀಯಕ್ಕೆ ಬಂದಾಗ ಅವರ ಅನುಯಾಯಿ ಆಗಿದ್ದೆ ಎಂದು ಹೇಳಿದರು.

ನಾನು ಹೊಟ್ಟೆಪಾಡಿಗೆ ಬೆಂಗಳೂರಿಗೆ ಬಂದಿದ್ದೆ,1976-77ರಲ್ಲಿ ಗೌಡರ ಭೇಟಿಯಾಯಿತು. ನಂತರ 30 ವರ್ಷಕ್ಕೂ ಹೆಚ್ಚು ಕಾಲ ನಾನು ಅವರ ಶಿಷ್ಯನಾಗಿ ರಾಜಕಾರಣದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಗೌಡರ ಪುತ್ರರಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ಇಬ್ಬರು ನನಗೆ ಸಹೋದರರಂತಿದ್ದಾರೆ ಎಂದು ಹೇಳಿದರು.

ನಾನು ಸ್ವಲ್ಪ ಗೊಂದಲಕ್ಕೆ ಸಂದರ್ಭದಲ್ಲಿ ನನ್ನ ನೋವು ಹಂಚಿಕೊಂಡ ಕುಟಂಬವೆಂದರೆ ಅದು ಗೌಡರ ಕುಟುಂಬ. ನನಗೆ ಸಮಾಧಾನ ಮಾಡಿ ಧೈರ್ಯವಾಗಿ ಪರಿಸ್ಥಿತಿ ಎದುರಿಸುವಂತೆ ದೇವೇಗೌಡರು ಸಲಹೆ ನೀಡಿದ್ದರು ಎಂದು ಸೋಮಣ್ಣ ಸ್ಮರಿಸಿದರು.

ರಾಜ್ಯದ ದೊಂಬರಾಟದ ಬಗ್ಗೆ ಅವರು ಒಂದು ಗಂಟೆಯಲ್ಲಿ ಮಾತನಾಡಿದರು ದೇಶದ ಭವಿಷ್ಯದಲ್ಲಿ ಮೋದಿ ಕಾರ್ಯವೈಖರಿಯನ್ನು ಮಾಜಿ ಪ್ರಧಾನಿಯಾಗಿ ಹೇಳುತ್ತಿರುವುದು ಅವರ ನಿಷ್ಕಲ್ಮಶತೆಗೆ ಕೈಗನ್ನಡಿಯಾಗಿದ್ದ ಅವರ ಮೇಲಿನ ನನ್ನ ನಂಬಿಕೆ ದುಪ್ಪಟ್ಟಾಗಿದೆ  ಎಂದು ತಿಳಿಸಿದರು.

ವಿಪಕ್ಷ ನಾಯಕನಾಗಿರುವ ಅಶೋಕ್ ನನ್ನ ಸ್ನೇಹಿತರು, ಅವರ ಮತ್ತು ನನ್ನ ನಡುವೆ ಯಾವುದೇ ಮನಸ್ತಾಪವಿಲ್ಲ, ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದು ಸೋಮಣ್ಣ ಇದೇ ವೇಳೆ ಸ್ಪಷ್ಟಪಡಿಸಿದರು.