ಕೇರಳ: ಕುಟುಂಬದವರ ಮುಂದೆಯೇ ಭೀಕರವಾಗಿ ಹತ್ಯೆಯಾಗಿದ್ದ ಬಿಜೆಪಿ ನಾಯಕನ ಹತ್ಯೆ ಪ್ರಕರಣ ಸಂಬಂಧ ಕೇರಳ ಕೋರ್ಟ್ 15 ಮಂದಿ ನಿಷೇಧಿತ ಪಿಎಫ್ ಐ ಕಾರ್ಯಕರ್ತರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸ್ ಅವರನ್ನು ಪತ್ನಿ ಮಕ್ಕಳ ಎದುರೇ 2021ರ ಡಿಸೆಂಬರ್ 19ರಂದು ಆಲಪುಝದ ಅವರ ಮನೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ರಂಜಿತ್ ಶ್ರೀನಿವಾಸನ್ ಕೇರಳದ ಬಿಜೆಪಿ ಒಬಿಸಿ ಮೊರ್ಚಾ ರಾಜ್ಯ ಕಾರ್ಯದರ್ಶಿಯಾಗಿದ್ದರು.
ರಂಜಿತ್ ಹತ್ಯೆ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಕೇರಳದ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಜೆ.ಶ್ರೀದೇವಿ ಅವರು ಇಂದು15 ಅಪರಾಧಿಗಳಿಗೂ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ನೈಸಮ್, ಅಜ್ಮಲ್, ಅನೂಪ್, ಮಹಮ್ಮದ್ ಅಸ್ಲಂ, ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಅಬ್ದುಲ್ ಕಲಾಂ, ಸರ್ಪುದ್ದೀನ್, ಮನ್ಷದ್, ಜಸೀಬ್ ರಾಜಾ, ನವಾಸ್, ಸಮೀರ್, ನಝೀರ್, ಝಾಕೀರ್ ಹುಸೈನ್, ಶಾಜಿ ಪೂವತ್ತುಂಗಲ್ ಹಾಗೂ ಶೆರ್ನಾಸ್ ಅಶ್ರಫ್ ಈ ಕೊಲೆ ಪ್ರಕರಣದ ಅಪರಾಧಿಗಳೆಂದು ಅವರುಗಳಿಗೆ ಮರಣದಂಡನೆ ಶಿಕ್ಷೆ ನೀಡಲಾಗಿದೆ.

