ಚೆಸ್ಕಾಂ ಎಇಇ ಲೋಕಾ ಬಲೆಗೆ

ಮೈಸೂರು: ಅನಧಿಕೃತ ಸಂಪರ್ಕದ ಪೆನಾಲ್ಟಿ ಕಡಿಮೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ಚೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಚೆಸ್ಕಾಂ ವಿಜಿಲೆನ್ಸ್ ಅಧಿಕಾರಿ ದೀಪಕ್ ಲೋಕಾ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ದೀಪಕ್ 3 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಹಿಡಿದಿದ್ದಾರೆ.

ಎಸ್ಪಿ ಟಿ.ಜೆ ಉದೇಶ್ ಅವರ ಮಾರ್ಗದರ್ಶನದಲ್ಲಿ ಡಿ ವೈ ಎಸ್‌ ಪಿ ಮ್ಯಾಥ್ಯು ಥಾಮಸ್,ಇನ್ಸಪೆಕ್ಟರ್ ರವಿಕುಮಾರ್ ಕಾರ್ಯಾಚರಣೆ ನಡೆಸಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ದೀಪಕ್ ನನ್ನು ಹಿಡಿದು ಹಣ ವಶಕ್ಕೆ ಪಡೆದಿದ್ದಾರೆ.