ಅಗಸ್ಟ್ 28 & 29ರಂದು ಸಿಐಟಿ ಪರೀಕ್ಷೆ

ಬೆಂಗಳೂರು: ಕೋವಿಡ್ ಎರಡನೇ ಅಲೆ ಕಾರಣಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡಿದ ಹಿನ್ನೆಲೆಯಲ್ಲಿ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನೂ ಮುಂದೂಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಹೊಸ ವೇಳಾಪಟ್ಟಿಯಂತೆ ಮುಂಬರುವ ಅಗಸ್ಟ್ 28 & 29ರಂದು ಸಿಇಟಿ ನಡೆಯಲಿದೆ. ಹಾಗೆಯೇ, 30ರಂದು ಕನ್ನಡ ಭಾμÁ ಪರೀಕ್ಷೆ ಇರುತ್ತದೆ. ಶೀಘ್ರದಲ್ಲಿಯೇ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.
ಈ ಮೊದಲು ಪ್ರಕಟಿಸಲಾಗಿದ್ದ ವೇಳಾಪಟ್ಟಿಯಂತೆ ಜುಲೈ 7 & 8 ರಂದು ಸಿಇಟಿ ಹಾಗೂ 9ರಂದು ಕನ್ನಡ ಪರೀಕ್ಷೆ ನಡೆಯಬೇಕಾಗಿತ್ತು.
ಹೆಚ್ಚಿನ ವಿವರಗಳಿಗೆ https://cetonline.karnataka.gov.in/kea/ ವೆಬ್ ತಾಣಕ್ಕೆ ಭೇಟಿ ನೀಡಬಹುದು.
ವಿದ್ಯಾರ್ಥಿಗಳು ಕೋವಿಡ್‍ನಿಂದ ಸುರಕ್ಷಿತವಾಗಿರಿ ಹಾಗೂ ಪಿಯುಸಿ ಮತ್ತು ಸಿಇಟಿ ಪರೀಕ್ಷೆಗೆ ಉತ್ತಮ ಸಿದ್ಧತೆ ಮಾಡಿಕೊಳ್ಳಿ ಎಂದು ಡಾ. ಅಶ್ವತ್ಥನಾರಾಯಣ ಹಾರೈಸಿದ್ದಾರೆ.