ಭೂ ಕಳಂಕಿತರು ಮತ್ತು ಪ್ರಾದೇಶಿಕ ಆಯುಕ್ತರ ನಡುವೆ ಒಳ ಒಪ್ಪಂದ ಆಗಿದೆ -ಹೆಚ್. ವಿಶ್ವನಾಥ್

ಮೈಸೂರು: ಭೂ ಕಳಂಕಿತರು ಮತ್ತು ಪ್ರಾದೇಶಿಕ ಆಯುಕ್ತರ ನಡುವೆ ಒಳ ಒಪ್ಪಂದ ನಡೆದಿದ್ದು, ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆರೋಪಿಸಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕಳಂಕಿತರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಪ್ರಾದೇಶಿಕ ಆಯುಕ್ತರ ಕಛೇರಿ ಎದುರು ಬಂದು ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ವಿಶ್ವನಾಥ್ ಆರೋಪಿಸಿದರು.
ಕಳಂಕಿತರು ಮತ್ತು ಪ್ರಾದೇಶಿಕ ಆಯುಕ್ತರ ನಡುವೆ ಒಳ ಒಪ್ಪಂದ ನಡೆದಿದ್ದು ಎಲ್ಲವನ್ನೂ ಸಾರಾಸಗಟಾಗಿ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದರು ವಿಶ್ವನಾಥ್.
ರೋಹಿಣಿಯವರ ಆದೇಶದಲ್ಲಿ ಇರದ್ದನ್ನು ತನಿಖೆ ಮಾಡಿಸಲು ಹೇಳುತ್ತಿದ್ದಾರೆ. ಅದನ್ನು ತನಿಖೆ ಮಾಡಿಸಿ ಆದೇಶದಲ್ಲಿರುವುದನ್ನು ಮುಚ್ಚಿಸಿ ಹಾಕುವ ಪ್ರಯತ್ನ ನಡೆಯುತ್ತಿದೆ. ನನಗೆ ಅವರ ಮೇಲೆ ಯಾವ ದ್ವೇಷವೂ ಇಲ್ಲ. ಭೂಗಳ್ಳ ಅನ್ನೋ ಕಳಂಕದಿಂದ ಹೊರಬರಲಿ ಅನ್ನೋ ಉದ್ದೇಶವೇ ಹೊರತು ದ್ವೇಷದಿಂದಲ್ಲ ಎಂದು ವಿಶ್ವನಾಥ್ ಹೇಳಿದರು.
ಪ್ರಾದೇಶಿಕ ಆಯುಕ್ತರು ಕಳಂಕಿತರ ನಡುವೆ ಒಂದು ರೀತಿಯ ಒಪ್ಪಂದ ಆಗಿರುವಂತೆ ಕಾಣಿಸುತ್ತದೆ. ಈಗಾಗಲೇ ಮಾತನಾಡಿ ಒಂದು ಒಪ್ಪಂದಕ್ಕೆ ಬಂದಂತೆ ಕಾಣಿಸುತ್ತಿದ್ದು, ಅವರ ವರ್ತನೆ ನೋಡಿದರೆ ಏನು ವರದಿ ಬರಬಹುದೆನ್ನುವುದು ಈಗಾಗಲೇ ತಿಳಿದು ಬರುವಂತಿದೆ. ಒಳ ಒಪ್ಪಂದ ನಡೆದು ವರದಿ ರೆಡಿ ಆಗಿದೆ. ವರದಿ ಸೋಮವಾರ ಕೊಡುತ್ತಾರೆ ಎಂದು ವಿಶ್ವನಾಥ್ ತಿಳಿಸಿದರು.
ಅದಕ್ಕೆ ನಾನು ಈ ಹಿಂದೆ ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಅವರಿಗೆ ಹೊಡಿತಾರೆ ಅಂತ ಒಂದು ತಿಂಗಳ ಹಿಂದೆಯೇ ಹೇಳಿದ್ದೆ. ಹಾಗೆಯೇ ಆಗಿದೆ. ಈಗಲೂ ಅದಕ್ಕೆ ಮೊದಲೇ ಮಾಧ್ಯಮದವರನ್ನು ಕರೆದಿದ್ದೇನೆ. ನಿಮಗೆ ವಿಷಯ ತಿಳಿಸಿದ್ದೇನೆ. ಸೋಮವಾರ ಪ್ರಾದೇಶಿಕ ಆಯುಕ್ತರು ಭೂಕಳಂಕಿತರ ಬಗ್ಗೆ ನೀಡುವ ವರದಿ ಯಾರೂ ನಂಬಂತಕ್ಕಂತದ್ದಲ್ಲ ಎಂದು ಅವರು ಹೇಳಿದರು.
ರೋಹಿಣಿ ಸಿಂಧೂರಿಯವರು ನೀಡಿದ ನಾಲ್ಕು ಆದೇಶದ ಬಗ್ಗೆಯೂ ಸೂಕ್ತ, ಸಮಗ್ರ ಪರಿಶೀಲನೆ ಆಗಬೇಕು, 98 ಸರ್ವೆ ನಂಬರ್ ಮುಡಾದ್ದು ಮುಡಾ ಆಯುಕ್ತರು, ಅಧ್ಯಕ್ಷರು ಏನು ಮಾಡುತ್ತಿದ್ದೀರಿ, ಅಮೂಲಾಗ್ರ ವಿಚಾರಣೆ ಆಗಬೇಕು. ಇμÉ್ಟ ಅಲ್ಲ, ಮೈಸೂರು ನಗರದಲ್ಲಿ ಬೇಕಾದಷ್ಟು ಆಗಿದೆ. ಎಲ್ಲವೂ ಸಂಪೂರ್ಣ ತನಿಖೆ ಆಗಲಿ, ನಗರಾಭಿವೃದ್ಧಿ ಮಂತ್ರಿಗಳು, ರೆವಿನ್ಯೂ ಮಂತ್ರಿಗಳು ಕೂಡ ಮಾತಾಡುತ್ತಿಲ್ಲ, ಮಾತಾಡಬೇಕು ಎಂದರು.